ಪುರುಷರ ಆಲೋಚನೆ ಬದಲಾದರೆ ಮಹಿಳೆ ಇನ್ನಷ್ಟು ಸದೃಢ: ಡಾ.ಎಚ್.ಸಿ.ಹೇಮಲತಾಒಂದು ದೇಶದ ಆರ್ಥಿಕ ಪ್ರಗತಿಯ ಸಾಧನೆಯಾಗಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಕಿರಣ್ ಮುಜುನ್ದಾರ್, ಸಾಲುಮರದ ತಿಮ್ಮಕ್ಕ ಇನ್ನೂ ಹಲವು ಮಹಿಳೆಯರು ಬಾಹ್ಯಾಕಾಶದಿಂದ ಹಿಡಿದು ಆಟೋ ಚಾಲನೆ ಮಾಡುವವರೆಗೂ ತಮ್ಮ ನೈಪುಣ್ಯತೆ, ಧೈರ್ಯ, ಸವಾಲುಗಳ ಮೂಲಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.