ಬೇಸಿಗೆ ಶಿಬಿರಗಳು ಕ್ರಿಯಾಶೀಲತೆಯೊಡನೆ ಸೃಜನಶೀಲತೆ ಬೆಳೆಸುತ್ತವೆ: ಬನ್ನೂರು ಕೆ. ರಾಜುಇಂದಿನ ಶಿಕ್ಷಣ, ವಿಷಯ, ವಿಚಾರ, ಆಟ, ಪಾಠ, ಪ್ರವಚನ, ಸರ್ಕಾರದ ನೀತಿ, ನಿಯಮ ಗಳಾವುವೂ ಹಿಂದಿನಂತಿಲ್ಲ. ಪೋಷಕರೂ ಒಳಗೊಂಡಂತೆ ಶಿಕ್ಷಕರ ಮನೋಸ್ಥಿತಿ ಕೂಡ. ಆಧುನಿಕ ಭರಾಟೆಯ ವೇಗದ ಜಗತ್ತಿನಲ್ಲಿ ಬಿತ್ತಿದ ತಕ್ಷಣ ಡಾಕ್ಟರ್ಸ್, ಎಂಜಿನಿಯರ್ಸ್, ಐಎಎಸ್, ಐಪಿಎಸ್ ಅಧಿಕಾರಿ ಗಳೆಂಬ ಫಲದ ನಿರೀಕ್ಷೆಯಲ್ಲಿ ಮಕ್ಕಳ ಭವಿಷ್ಯವನ್ನು ಅವರು ತೆಗೆಯುವ ಅಂಕಗಳು ನಿರ್ಧರಿಸುವಂತಾಗಿದೆ.