ಚಾಲಕರಿಲ್ಲದೆ ಬಸ್‌ಗಳು ಡಿಪೋದಲ್ಲಿ ಬಾಕಿ: ತಕ್ಷಣ ಚಾಲಕರ ನೇಮಿಸಲು ಗಂಟಿಹೊಳೆ ಆಗ್ರಹಕುಂದಾಪುರ ಕೆಎಸ್ಸಾರ್ಟೀಸಿ ಡಿಪೋದಲ್ಲಿ 45ಕ್ಕೂ ಅಧಿಕ ಮಂಜೂರಾದ ಚಾಲಕ ಹುದ್ದೆ ಇದ್ದರೂ ಒಂದು ಭರ್ತಿ ಮಾಡಿಕೊಂಡಿಲ್ಲ. ಬಸ್ ಕೂಡ ಓಡಾಡುತ್ತಿಲ್ಲ, ಡ್ರೈವರ್, ಕಂಡಕ್ಟರ್ ಗಳ ನೇಮಕಾತಿಯೂ ಮಾಡುತ್ತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ ಎಂದು ಶಾಸಕ ಗಂಟಿಹೊಳೆ ಗಮನ ಸೆಳೆದಿದ್ದಾರೆ.