ಬತ್ತ, ಗೋವಿನ ಜೋಳ ಬೆಳೆದ ಜಿಲ್ಲೆಯ ರೈತರಿಗೆ ₹೪೧ ಕೋಟಿ ವಿಮಾ ಪರಿಹಾರಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ೨೦೨೩-೨೪ನೇ ಸಾಲಿನ ಬತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿಯ ವಿಮೆಯ ಸುಮಾರು ₹೪೧ ಕೋಟಿ ಜಮಾ ಆಗಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಶೀಘ್ರವಾಗಿ ವರ್ಗಾಯಿಸಲಾಗುತ್ತದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.