ಥಾಯ್ಲೆಂಡ್ ಮಾಸ್ಟರ್ಸ್: ಶ್ರೀಕಾಂತ್ ಹೊರಕ್ಕೆ, ಮಿಥುನ್ ಕ್ವಾರ್ಟರ್ಗೆಥಾಯ್ಲೆಂಡ್ ಮಾಸ್ಟರ್ಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ, ಮಾಜಿ ವಿಶ್ವ ನಂ.1 ಶಟ್ಲರ್ ಕಿದಂಬಿ ಶ್ರೀಕಾಂತ್ ಸೋತು ಹೊರಬಿದ್ದಿದ್ದಾರೆ. ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಅವರು ಕರ್ನಾಟಕದ ಮಿಥುನ್ ಮಂಜುನಾಥ್ ವಿರುದ್ಧ 9-21, 21-12, 17-21ರಲ್ಲಿ ಸೋಲನುಭವಿಸಿದರು.