ಕುಸ್ತಿ ಫೆಡರೇಷನ್ ಹೈಡ್ರಾಮಾ: ಬ್ರಿಜ್ಆಪ್ತರಿಗೆ ಜಯ, ಆಟಗಾರರ ಕಣ್ಣೀರು!ಲೈಂಗಿಕ ದೌರ್ಜನ್ಯ, ಕಿರುಕುಳ ಸೇರಿದಂತೆ ಕುಸ್ತಿಪಟುಗಳಿಂದ ಗಂಭೀರ ಆರೋಪಗಳನ್ನು ಹೊತ್ತುಕೊಂಡು ಡಬ್ಲ್ಯುಎಫ್ಐನಿಂದ ಬ್ರಿಜ್ ಕೆಳಗಿಳಿದರೂ, ಫೆಡರೇಷನ್ನಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಪ್ರಭಾವಿ ಬ್ರಿಜ್ ಯಶಸ್ವಿಯಾಗಿದ್ದಾರೆ. ಒಂದರ್ಥದಲ್ಲಿ ದೇಶದ ಕುಸ್ತಿ ಆಡಳಿತವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆದಿದ್ದಾರೆ.