ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಪ್ರವಾಸ ಯಶಸ್ವಿ ಆಗಿದ್ದು. ಮುಂದಿನ 1 ದಶಕದಲ್ಲಿ ಜಪಾನ್ ಭಾರತದಲ್ಲಿ ₹6 ಲಕ್ಷ ಕೋಟಿ (10 ಟ್ರಿಲಿಯನ್ ಯೆನ್) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದಲ್ಲದೆ ಚಂದ್ರಯಾನ-5 ಅನ್ನು ಜಂಟಿಯಾಗಿ ಕೈಗೊಳ್ಳಲು ನಿರ್ಧರಿಸಿವೆ
ರಷ್ಯಾದಿಂದ ಭಾರತಕ್ಕೆ ರಫ್ತಾಗುವ ರಸಗೊಬ್ಬರ ಪ್ರಮಾಣವು 2025ರ ಮೊದಲ 6 ತಿಂಗಳಲ್ಲಿ ಶೇ.20ರಷ್ಟು ಏರಿಕೆಯಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
‘ಜಾಗತಿಕ ಆರ್ಥಿಕತೆಯ ಸ್ಥಿರತೆ ಕಾಪಾಡಲು ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವುದು ಅವಶ್ಯಕ. ಇದಕ್ಕಾಗಿ ಪರಸ್ಪರ ಗೌರವ, ಆಸಕ್ತಿ ಮತ್ತು ಸೂಕ್ಷ್ಮತೆಯ ಆಧಾರದಲ್ಲಿ ದೀರ್ಘಕಾಲಿನ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ಭಾರತ ಸಿದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮೂಲಕ ಉಕ್ರೇನ್ ಯುದ್ಧದ ಬೆಂಕಿಗೆ ಭಾರತ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸುತ್ತಿದ್ದ ಅಮೆರಿಕ, ಇದೀಗ ಉಕ್ರೇನ್ ಯುದ್ಧವನ್ನೇ ಮೋದಿ ಯುದ್ಧ ಎಂದು ಬಣ್ಣಿಸಿದೆ.
ಅಮೆರಿಕಕ್ಕೆ ಹೋಗಲಿಚ್ಛಿಸುವ ಅಥವಾ ಅದಾಗಲೇ ನೆಲೆಸಿರುವ ವಸಲಿಗರ ಪಾಲಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ವಲಸೆ ನೀತಿಗಳು ದುಃಸ್ವಪ್ನವಾಗಿ ಪರಿಣಮಿಸಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಈ ವರ್ಷದ ಜನವರಿಯಿಂದ ಜೂನ್ ನಡುವೆ ಅಮೆರಿಕದಲ್ಲಿರುವ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಇಳಿಕೆಯಾಗಿದೆ
ಇಂಟೆಲ್ ಕಂಪನಿಯ ಸಿಇಒ ಲಿಪ್-ಬು ಟ್ಯಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇತ್ತೀಚೆಗೆ ಒತ್ತಡ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಮೆರಿಕ ಸರ್ಕಾರ ಇಂಟೆಲ್ನ ಶೇ.10ರಷ್ಟು ಪಾಲು ಖರೀದಿಸಲಿದೆ ಎಂದು ಘೋಷಿಸಿದ್ದಾರೆ.