ಪೂಜಾರ ತರ ಹಿಟ್ ಆ್ಯಂಡ್ ರನ್ ಗಿರಾಕಿ ನಾನಲ್ಲ
Aug 13 2024, 01:03 AM ISTಕನ್ನಡ ಪ್ರಭ ವಾರ್ತೆ ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ತರ ನಾನು ಹಿಟ್ ಆ್ಯಂಡ್ ರನ್ ಗಿರಾಕಿ ಅಲ್ಲ, ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದಲ್ಲಿ ಸಮರ್ಥವಾಗಿ ಎದುರಿಸುವೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಗುಡುಗಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇನಾದರೂ ಮೊಕದ್ದಮೆ ಹೂಡಿದಲ್ಲಿ, ತಂಟೆಗೆ ಬಂದಲ್ಲಿ ಅವರ ಬಂಡವಾಳ ಬಯಲಿಗೆ ಎಳೆಯುವೆ. ಬ್ಲಾಕ್ ಮೇಲ್ ಉದ್ಯೋಗ ಬಂದ್ ಮಾಡಿ, ಪಕ್ಷದ ವ್ಯವಸ್ಥೆಯಲ್ಲಿ ಹೇಗೆ ಇರಬೇಕು ಎನ್ನುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದರು.