ಮಳೆಹಾನಿ ಮುಂಜಾಗ್ರತೆ ಬಗ್ಗೆ ಅಧಿಕಾರಿಗಳೊಂದಿಗೆ ಶಾಸಕ ಮಂಜು ಸಭೆ
May 29 2025, 12:12 AM ISTಮಳೆಹಾನಿ ಎದುರಿಸುವ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವು ಹಾನಿಗಳು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ೭೫ಲ್ಲಿ ಭೂಕುಸಿತಗಳು, ಅಲ್ಲಲ್ಲಿ ಮರಗಳು ಬೀಳುತ್ತಿರುವುದು, ಮನೆ ಕುಸಿತ ಸೇರಿದಂತೆ ಇನ್ನು ಹಲವು ಹಾನಿಗಳು ಉಂಟಾಗಿದೆ. ಮುಂಗಾರು ಆರಂಭವಾಗುವ ಮೊದಲೇ ಈ ರೀತಿಯಾದರೆ ಇನ್ನು ಮುಂಗಾರು ಪ್ರಾರಂಭವಾದ ಮೇಲೆ ಇನ್ನು ಯಾವ ರೀತಿ ಆಗಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮುನ್ನಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.