ಹುಬ್ಬೆ ಹುಣಸೆ ಕೆರೆಗೆ ಶಾಸಕ ಮಂಜುನಾಥ್‌ ಭೇಟಿ, ಪರಿಶೀಲನೆ

Aug 24 2025, 02:00 AM IST
ಬಹು ನಿರೀಕ್ಷಿತ ಹುಬ್ಬೆ ಹುಣಸೆ ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭಗೊಂಡಿದ್ದು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಾಲೂಕಿನ ಉದ್ದನೂರು ಗ್ರಾಮದ ಬಳಿ ಬರುವ ತಟ್ಟೆ ಹಳ್ಳಕ್ಕೆ ನಿರ್ಮಾಣ ಮಾಡಲಾಗಿರುವ ಹುಬ್ಬೆ ಹುಣಸೆ ಕೆರೆ ವಿಸ್ತೀರ್ಣ132 ಎಕರೆ ಇರುವುದರಿಂದ 900 ಎಕರೆ ನೀರಾವರಿ ಯೋಜನೆಯ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ 132 ಎಕರೆಯಲ್ಲಿ ಹಲವಾರು ಎಕರೆ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಲು ಭೂಮಾಪನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಜಂಟಿ ಸರ್ವೇ ಕಾರ್ಯ ಮುಗಿದಿದೆ. ಒತ್ತುವರಿಯಾಗಿರುವುದನ್ನು ಹಿಟಾಚಿ ಯಂತ್ರದ ಮೂಲಕ ಕೆಲವು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸ್ಥಳಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.