ಸುಡುಬಿಸಿಲು, ಬೆಲೆ ಏರಿಕೆ ನಡುವೆ ಯುಗಾದಿ ಸಂಭ್ರಮಮಾವಿನ ಎಲೆ, ಹಣ್ಣು, ಹೂವು, ಎಲೆ ಅಡಿಕೆ, ತರಕಾರಿಗಳ ಅಂಗಡಿಗಳು ತುಂಬಿ ತುಳುಕುತ್ತಿದ್ದರೆ ದಿನಸಿ ಅಂಗಡಿಗಳಲ್ಲಿ ಬೆಲ್ಲ, ಬೇಳೆ ವ್ಯಾಪಾರವೂ ಜೋರಾಗಿಯೇ ನಡೆದಿದೆ. ಯುಗಾದಿಗೆ ಹೊಸ ಬಟ್ಟೆ ಹಾಕಲೇಬೇಕು ಎಂಬ ಸಂಪ್ರದಾಯದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆ, ಎಂಜಿ ರಸ್ತೆ, ಕಾಳಮ್ಮ ಗುಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು.