ಇಂದು ಐತಿಹಾಸಿಕ ಶ್ರೀಭೋಗಾಪುರೇಶ ರಥೋತ್ಸವಮಧ್ಯಮ ಪಾಂಡವ, ಅರ್ಜುನನ ಮರಿಮೊಮ್ಮಗನಾದ ಜನಮೇಜಯ ಮಹಾರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಭೋಗಾಪುರೇಶ ದೇವಸ್ಥಾನ ಸುಪ್ರಸಿದ್ಧಿ ಹೊಂದಿದೆ. ಭಿನ್ನ ವಿಗ್ರಹ ಪೂಜೆಗೊಳ್ಳುತ್ತಿರುವ ಏಕೈಕ ದೇವಸ್ಥಾನ ಇದಾಗಿದೆ. ದಾಸರು, ಸಂತರು, ವಿಜ್ಞಾನಿಗಳು, ಪೀಠಾಧಿಪತಿಗಳು ದರ್ಶನ ತೆಗೆದುಕೊಂಡು ಅನುಗ್ರಹಿತರಾದ ವಿಶಿಷ್ಟ ಕ್ಷೇತ್ರವಾಗಿದ್ದು, ಶ್ರೀ ಭೋಗಾಪುರೇಶ ನವಲಿ ವಿಶಿಷ್ಟ ಕ್ಷೇತ್ರಗಳಲ್ಲಿ ಒಂದಾಗಿದೆ.