ಮಾರೇನಹಳ್ಳಿಗೆ ರಾಜ್ಯದ ತಜ್ಞರ ತಂಡ ಭೇಟಿ,ನೀರಿನ ಮೂಲ ಪರಿಶೀಲನೆಗ್ರಾಮದಲ್ಲಿ ಸಂಚರಿಸಿ ಮನೆಮನೆಗಳಿಂದ ಮಾಹಿತಿ ಸಂಗ್ರಹಿಸಿದ ಸಾಂಕ್ರಾಮಿಕ ರೋಗ ತಜ್ಞರ ತಂಡ, ಗ್ರಾಮದ ಜನತೆಯು ಬಳಸುತ್ತಿರುವ ಗ್ರಾಪಂನಿಂದ ಪೂರೈಕೆಯಾಗುವ ನೀರು ಹೊರತುಡಿಸಿ ಇತರೆ ಎಲ್ಲಾ ನೀರಿನ ಮೂಲಗಳನ್ನು ವೀಕ್ಷಿಸಿದರು. ನಂತರ ಜಲಮೂಲದ ನೀರನ್ನು ಪರೀಕ್ಷೆಗೆ ಒಳಪಡಿಸಲು ತಜ್ಞರ ತಂಡ ನಿರ್ಧರಿಸಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತು.