ಬಸವಣ್ಣನವರು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರುಬಸವಣ್ಣನವರು ಕೇವಲ ಒಂದು ಧರ್ಮ, ಪಂಗಡಕ್ಕೆ ಸೀಮಿತರಾಗಿರಲಿಲ್ಲ. ಇಡೀ ಮಾನವ ಕುಲಕ್ಕೆ ಸೇರಿದವರಾಗಿದ್ದು ಅವರ ವಚನಗಳು ಸರಳವಾಗಿದ್ದು ಅವುಗಳಲ್ಲಿ ಅಡಗಿರುವ ಸತ್ಯಗಳು ಸಾರ್ವಕಾಲಿಕವಾಗಿವೆ. ಅವರು ಜಾತಿ, ಮತ, ಲಿಂಗಭೇದಗಳನ್ನು ಮೀರಿ ನಿಂತು, ಎಲ್ಲರೂ ಸಮಾನರು ಎಂಬ ಕ್ರಾಂತಿಕಾರಿ ಕಲ್ಪನೆಯನ್ನು ಸಾರಿದರು. ಸಮಾಜ ಸುಧಾರಕ, ಕ್ರಾಂತಿಕಾರಿ ಚಿಂತಕ ಮತ್ತು ಶ್ರೇಷ್ಠ ಮಾನವತಾವಾದಿ ಬಸವಣ್ಣನವರು ತಮ್ಮ ತತ್ವ, ಸಿದ್ಧಾಂತಗಳ ಮೂಲಕ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.