ಪುತ್ತಿಗೆ ಪರ್ಯಾಯ: ನಿರೀಕ್ಷೆಗೂ ಮೀರಿ ಹರಿದು ಬಂತು ಹೊರೆ ಕಾಣಿಕೆ...ಭಕ್ತರು ದೂರದೂರುಗಳಿಂದ ಲಕ್ಷಲಕ್ಷ ಪ್ರಮಾಣದಲ್ಲಿ ಹಸಿರು ಹೊರೆಕಾಣಿಕೆಯನ್ನು ತಂದೊಪ್ಪಿಸಿದ್ದಾರೆ. ಜ.8ರಿಂದ 17ರ ವರೆಗೆ 10 ದಿನಗಳ ಕಾಲ ಮುಖ್ಯವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ, ಸಹಕಾರಿ ಸಂಘಗಳು, ಕಟೀಲು ದೇವಾಲಯ, ಮಟ್ಟುವಿನ ಗುಳ್ಳು ಬೆಳೆಗಾರರು, ಮಲ್ಪೆಯ ಮೊಗವೀರರು ಹೀಗೆ ನೂರಕ್ಕೂ ಹೆಚ್ಚು ಕಡೆಗಳಿಂದ ಅಕ್ಕಿಬೇಳೆ ತರಕಾರಿಗಳು ಬಂದಿವೆ.