ಗುಂಡ್ಲುಪೇಟೆ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ಪ್ರಸನ್ನಮೂರ್ತಿ ಗುರುವಿನಪುರ ಅವರ ‘ಆಷಾಢಮಾಸ’ ಎಂಬ ಮತ್ತೊಂದು ಕಥಾಸಂಕಲನವನ್ನು ಹೊರತಂದಿದ್ದಾರೆ. ಎಲ್ಲಾ ಕಥೆಗಳಲ್ಲೂ ಗ್ರಾಮೀಣ ಸೊಗಡು, ಚಾಮರಾಜನಗರ ಪ್ರಾದೇಶಿಕ ಭಾಷಾ ಶೈಲಿ ಎದ್ದು ಕಾಣಿಸುತ್ತದೆ.
ಜಾನಪದ ಒಂದು costume ಅಲ್ಲ, ಒಂದು dance ಅಲ್ಲ, ಒಂದು sound effect ಅಲ್ಲ, ಒಂದು horror element ಅಲ್ಲ. ಅದು ಜೀವಂತ ಜನಸಂಸ್ಕೃತಿ. ಆ ಜೀವಂತ ಸಂಸ್ಕೃತಿಯನ್ನು ಪರದೆಯ ಮೇಲೆ ತರುವಾಗ ನಮ್ಮ ಜವಾಬ್ದಾರಿ ಕೇವಲ ಅದನ್ನು ತೋರಿಸುವುದಲ್ಲ; ಅದರ ಆತ್ಮವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದೂ ಹೌದು.
ಪ್ರತ್ಯೇಕ ರೈಲು ವಿಭಾಗದ ನಮ್ಮ ಆಸೆಗೆ ಫಲ ಸಿಗಲಿಲ್ಲವಾದರೂ ವಿವಿಧ ವಲಯ, ವಿಭಾಗದ ನಡುವೆ ಸಂವಹನ ಮಾಡಿ ಮುಂದಿನ ದಿನಗಳಲ್ಲಿ ಮಂಗಳೂರು ರೈಲ್ವೆ ನಿಲ್ದಾಣಗಳಿಗೆ ಏನೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಪಿಯೂಶ್ ಗೋಯಲ್ ಭರವಸೆ ನೀಡಿದ್ದರು.
ಪ್ರಕೃತಿಯ ವಿಚಿತ್ರಗಳಲ್ಲಿ ಇದು ಒಂದು ಇದು ಹಿಪ್ಪು ನೇರಳೆ ಹಣ್ಣಿನಂತೆ ಕಂಡರೂ ಇದು ಗಿಡವಲ್ಲ ಬಳ್ಳಿ ಮುಳ್ಳು ಬೇರೆ ಇದೆ ಜರ್ಮನಿಯಲ್ಲಿ ಎಲ್ಲಾ ಕಡೆ ಬೇಲಿಯಲ್ಲಿ ಬೆಳೆಯ ಒಂದು ತರಹದ ಮುಳ್ಳಿನ ಹಣ್ಣು ನೋಡಲು ಎಷ್ಟು ವಿಶೇಷವಾಗಿದೆಯೋ ತಿನ್ನಲು ಕೂಡ ಅಷ್ಟೇ ವಿಭಿನ್ನ ಸ್ವಲ್ಪ ಹುಳಿ, ಸ್ವಲ್ಪ ಸಿಹಿ ಇರುವ ಇದರ ರುಚಿ ಕಾಡಿನ ನೈಸರ್ಗಿಕ ಸೊಗಡನ್ನು ನೆನಪಿಸುತ್ತದೆ
ನಾರಿಯ ಗೌರವ ಮತ್ತು ಸುರಕ್ಷತೆ ಸಮಾಜದ ಜವಾಬ್ದಾರಿಯೆಂಬ ಸಂದೇಶ ನಮ್ಮ ಪರಂಪರೆಯಲ್ಲಿದೆ. ಹೀಗಾಗಿ ರಕ್ಷಾಬಂಧನದ ಅರ್ಥವನ್ನು ಕೇವಲ ‘ಅಣ್ಣನು ತಂಗಿಯನ್ನು ರಕ್ಷಿಸಬೇಕು’ ಎಂಬ ಸೀಮಿತ ಅರ್ಥದಲ್ಲಿ ನೋಡುವುದಕ್ಕಿಂತ, ‘ಪರಸ್ಪರರು ಪರಸ್ಪರರ ಸುಖ-ದುಃಖಗಳಲ್ಲಿ ಬೆಂಬಲವಾಗಿ ನಿಲ್ಲಬೇಕು’ ಎಂಬ ವಿಶಾಲ ಅರ್ಥದಲ್ಲಿ ಗ್ರಹಿಸುವುದು ಸೂಕ್ತ.
ಭಾರತದಲ್ಲಿ ಇತ್ತೀಚಿನ ಆಹಾರ ಬೆಲೆಗಳ ಏರಿಕೆಯನ್ನು ಸಮಗ್ರ ಆಹಾರ ದರ ಏರಿಕೆಯೆಂದು ಮಾತ್ರ ನೋಡುವುದು ಸೂಕ್ತವಲ್ಲ. ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳೂ ಏರಿಕೆಯಾಗಿಲ್ಲ. ತೊಗರಿಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಅರಿಶಿನದ ಬೆಲೆಗಳು 2024ರ ಮಟ್ಟದಿಂದ ಗಣನೀಯವಾಗಿ ಇಳಿಕೆಯಾಗಿವೆ.
1983ರ ಕರ್ನಾಟಕ ವಿಧಾನಸಭೆ ಚುನಾವಣೆಯು ರಾಜ್ಯ ರಾಜಕೀಯದಲ್ಲಿ ಒಂದು ನಿರ್ಣಾಯಕ ಘಟ್ಟ. ಜನತಾ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಹೆಗಡೆಯವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ದೇಶದ 2ನೇ ಮತ್ತು 3ನೇ ಹಂತದ ಪಟ್ಟಣಗಳ ಸಣ್ಣ ಉದ್ದಿಮೆಗಳು ಇಂದು ಡಿಜಿಟಲ್ ತಂತ್ರಜ್ಞಾನದ ಬಲದಿಂದ ರಾಷ್ಟ್ರಮಟ್ಟದ ಬ್ರ್ಯಾಂಡ್ಗಳಾಗಿ ರೂಪಾಂತರಗೊಳ್ಳುತ್ತಿವೆ. ಅಮೆಜಾನ್ ಇಂಡಿಯಾದಲ್ಲಿ 17 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರ ಪೈಕಿ ಶೇ. 70ಕ್ಕೂ ಹೆಚ್ಚು ಮಂದಿ ಸಣ್ಣ ನಗರಗಳಿಂದಲೇ ಬಂದಿರುವುದು ವಿಶೇಷ.
ಟೀನೇಜ್ ಹುಡುಗರು ಇದೀಗ ನೇರ ಹೂಡಿಕೆಗೇ ಇಳಿದುಬಿಟ್ಟಿದ್ದಾರೆ. ಇವರು ವಯಸ್ಕರಾದಾಗ ಇನ್ವೆಸ್ಟ್ಮೆಂಟ್ ಮಾಸ್ಟರ್ಗಳಾಗಬಹುದು. ಟೀನ್ಗಳ ಕೆಲವು ಹಣಕಾಸು ನಿರ್ವಹಣೆಯ ಸೂತ್ರಗಳು ಇಲ್ಲಿವೆ.
ಬುಕ್ ಬ್ರಹ್ಮ ಸಂಸ್ಥೆ ಕಾದಂಬರಿಯ ಹಸ್ತಪ್ರತಿಗೆ ನೀಡುವ ಪ್ರತಿಷ್ಠಿತ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ ಈ ಸಲ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮಹೇಶ್ ಅರಬಳ್ಳಿ ಅವರ ಚೊಚ್ಛಲ ಕಾದಂಬರಿ ‘ನೀರವ’ ಕೃತಿಗೆ ಸಂದಿದೆ
special