ಗುಜರಿಗೆ ಸೇರುವ ಬಸ್‌ಗಳಿಗೆ ರಸ್ತೆಯಲ್ಲಿಯೇ ಸುಸ್ತು!ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಯಾದ ಶಕ್ತಿ ಯೋಜನೆ ಆರಂಭಗೊಂಡು ವರ್ಷಗಳೇ ಗತಿಸಿವೆ. ಆದರೆ, ಪ್ರಯಾಣಿಕರ ಪ್ರಯಾಣದ ಪ್ರಯಾಸ ಮಾತ್ರ ಇನ್ನೂ ತಗ್ಗಿಲ್ಲ. ಬೇರೆ ಊರಿಗೆ ಹೋಗಬೇಕೆಂದರೆ ಬಸ್‌ಗಳೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಗುಳೇದಗುಡ್ಡಕ್ಕೆ ಹಳೆ ಬಸ್‌ಗಳನ್ನೇ ಓಡಿಸುತ್ತಿದ್ದಾರೆ. ಹೀಗಾಗಿ ಅವು ಪದೇಪದೇ ಕೆಟ್ಟು ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.