ರಾಜ್ಯದಲ್ಲಿಯೇ ನಂ.೧ ಬ್ಯಾಂಕ್ ಆಗಲಿದೆಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿಯ ಉತ್ತಮ ವ್ಯವಹಾರ ಹಾಗೂ ಸದಸ್ಯರ ಗ್ರಾಹಕರ ಉತ್ತಮ ಸ್ಪಂದನೆ ಸಿಗುತ್ತಿದ್ದು, ಬರುವ ದಿನಗಳಲ್ಲಿ ಈ ಬ್ಯಾಂಕ್ ರಾಜ್ಯದಲ್ಲಿ ನಂ.೧ ಬ್ಯಾಂಕ್ ಆಗಲಿದೆ. ಜತೆಗೆ ಬ್ಯಾಂಕಿನ ಕಟ್ಟಡದ ೨೫ನೇ ವರ್ಷ ಬೆಳ್ಳಿ ಮಹೋತ್ಸವ ಆಚರಣೆ ಸಹಕಾರಿ ಕ್ಷೇತ್ರದಲ್ಲಿ ಎಂದು ಮರೆಯದ ಕಾರ್ಯಕ್ರಮವಾಗಲಿದೆ ಎಂದು ಮಾಜಿ ಸಚಿವ, ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.