ಚೀಟ್ಸ್, ಠೇವಣಿ ಹೆಸರಿನಲ್ಲಿ ಬಹುಕೋಟಿ ಪಂಗನಾಮಶಹಾಬಾದ ನಗರದ ಮುಖ್ಯ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಬಟ್ಟೆ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಭಾಟೀಯಾ ಕುಂಟುಂಬ, ನಗರದ ಜನರಲ್ಲಿ ಠೇವಣಿ, ಚೀಟ್ ಫಂಡ್, ಮುದ್ದತ್ ಠೇವಣಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿ, ಪಂಗನಾಮ ಹಾಕಿ, ರಾತ್ರೋರಾತ್ರಿ ಪರಾರಿಯಾಗಿದ್ದು, ಈ ಕುರಿತು ಸಂತ್ರಸ್ಥರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.