ಕಾಶ್ಮೀರದಲ್ಲಿ ಕೊಪ್ಪಳ ಪ್ರವಾಸಿಗರು ಸುರಕ್ಷಿತಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಚಿವ ಸಂತೋಷ ಲಾಡ್ ಅವರಿಗೆ ಕೊಪ್ಪಳ ಪ್ರವಾಸಿಗರ ಮಾಹಿತಿ ನೀಡಿ, ರಕ್ಷಿಸುವಂತೆ ಕೋರಿದ್ದರು. ಹೀಗಾಗಿ, ಸಚಿವ ಸಂತೋಷ ಲಾಡ್, ಪ್ರವಾಸಿಗರು ತಂಗಿದ್ದ ಹೋಟೆಲ್ಗೆ ತೆರಳಿ ಮಾತನಾಡಿದರು. ಯಾರೂ ಸಹ ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸರ್ಕಾರವಿದೆ. ನಿಮ್ಮನ್ನು ಸುರಕ್ಷಿತವಾಗಿ ನಿಮ್ಮೂರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.