ಗ್ರಾಮದೇವತೆ ಜಾತ್ರೆಯಲ್ಲಿ ಬರಿಗಾಲಲ್ಲಿ ತಿರುಗುವ ಜನಗ್ರಾಮದೇವತೆ ಜಾತ್ರೆ ಐದು ದಿನ ನಡೆಯಲಿದ್ದು ಮೊದಲ ಮೂರು ದಿನ ದೇವಿಗೆ ಧಾರ್ಮಿಕ ವಿಧಿ-ವಿಧಾನ ನಡೆಯಲಿದೆ. ಹೀಗಾಗಿ ಸೋಮವಾರದಿಂದ ಬುಧವಾರ ವರೆಗೂ ಗ್ರಾಮದಲ್ಲಿ ಯಾರೂ ಚಪ್ಪಲಿ ಧರಿಸುವಂತಿಲ್ಲ. ಮನೆಯಲ್ಲಿ ಮಿಕ್ಸಿ ಬಳಸುವಂತಿಲ್ಲ. ಎತ್ತಿನ ಬಂಡಿ, ತಳ್ಳುಬಂಡಿ, ಬೈಕ್ ಸೇರಿದಂತೆ ಇತರೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ.