ಶಿಕ್ಷಣದಿಂದ ಸಾಮಾಜಿಕ ಸ್ಥಿರತೆ, ಅಭಿವೃದ್ಧಿ ಸಾಧ್ಯತಾಲೂಕಿನ ತಳಕಲ್ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಲ್ಲಿನ 40 ಮಕ್ಕಳಿಗೆ ತಳಕಲ್ ಗ್ರಾಪಂ ಸದಸ್ಯ ಉಮೇಶಗೌಡ ಪೊಪಾ ಹಾಗು ಡಿ.ವಿರುಪಾಕ್ಷಗೌಡ ಸಮವಸ್ತ್ರ ವಿತರಣೆ ಮಾಡಿದರು.ತಳಕಲ್ ಗ್ರಾಮದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ನನ್ನ ತಾಯಿ ರತ್ಮಮ್ಮ ಆಸೆಯಂತೆ ನಾನು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದ್ದೇನೆ. ಕಾನ್ವೆಂಟ್ ಬದಲಾಗಿ ಅಂಗನವಾಡಿಗೆ ಮಕ್ಕಳನ್ನು ಕಲಿಕೆಗೆ ಎಲ್ಲರೂ ಕಳಿಸಬೇಕು. ಅಂಗನವಾಡಿ ಎಂಬುದು ಶಿಕ್ಷಣದ ಬುನಾದಿ ಇದ್ದಂತೆ. ಪ್ರತಿ ಮಗು ಅಂಗನವಾಡಿಯಲ್ಲಿ ಕಲಿಕೆ, ಕ್ರೀಯಾ ಚಟುವಟಿಕೆ ಜತೆಗೆ ಎಲ್ಲ ಮಕ್ಕಳ ಜತೆಗೆ ಬೇರೆಯುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಸ್ಥಿರತೆ ಹಾಗು ಅಭಿವೃದ್ಧಿ ಸಾಧ್ಯ ಎಂದರು.