ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ ಆಯೋಜನೆಗೆ ಕರ್ನಾಟಕ ಸಜ್ಜಾಗಿದೆ. ಡಿ.6ರಿಂದ 8ರ ವರೆಗೂ ಬೆಂಗಳೂರಿನಲ್ಲಿ ಹಿರಿಯರ ಕುಸ್ತಿ ಕೂಟ ನಡೆಯಲಿದೆ ಎಂದು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಹಾಗೂ ಕರ್ನಾಟಕ ಕುಸ್ತಿ ಸಂಸ್ಥೆ ಶುಕ್ರವಾರ ಮಾಹಿತಿ ಪ್ರಕಟಿಸಿದೆ.
ಇಲ್ಲಿನ ಡರ್ಬನ್ ಕ್ರೀಡಾಂಗಣ ಶುಕ್ರವಾರ ಸಂಜು ಸ್ಯಾಮ್ಸನ್ ದರ್ಬಾರ್ಗೆ ಸಾಕ್ಷಿಯಾಯಿತು. ಭರ್ಜರಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ಸ್ಯಾಮ್ಸನ್ ಸ್ಫೋಟಕ ಶತಕ ಸಿಡಿಸಿದ್ದು, ಸತತ 2 ಟಿ20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತ ಮೊದಲ ಬ್ಯಾಟರ್ ಎಂಬ ವಿಶೇಷ ದಾಖಲೆ ಬರೆದಿದ್ದಾರೆ.