ಒಂದೇ ಸೂರಿನಡಿ ಮಹಾತ್ಮನ ಜೀವನ ದರ್ಶನ ಗಾಂಧಿ ಭವನದೇಶೀಯ ಶೈಲಿಯಲ್ಲಿ ಸ್ಥಳೀಯ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಗಾಂಧಿ ಕುಟೀರಗಳ ಮಾದರಿಯಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಮುಖ್ಯವಾಗಿ ಎರಡು ವಿಭಾಗಗಳನ್ನು ಹೊಂದಲಾಗಿದ್ದು, ಮುಖ್ಯ ಕಟ್ಟಡದಲ್ಲಿ ವಿವಿಧೋದ್ದೇಶ ಸಭಾಂಗಣ, ಗ್ರಂಥಾಲಯ, ಮತ್ತೊಂದು ವಿಭಾಗದಲ್ಲಿ ಕಚೇರಿ, ತರಬೇತಿ ಕೇಂದ್ರವಿದೆ.