6 ತಿಂಗಳಲ್ಲಿ 49,435 ನಾಯಿ ಕಡಿತದ ಪ್ರಕರಣಗಳು..!ಏಳು ಜಿಲ್ಲೆಗಳ ಪೈಕಿ ಅತೀ ಹೆಚ್ಚು (12,392) ಪ್ರಕರಣಗಳು ಬಾಗಲಕೋಟೆ ಜಿಲ್ಲೆಯಲ್ಲಿ ಆಗಿವೆ. ಬೆಳಗಾವಿಯಲ್ಲಿ 5562 ಪ್ರಕರಣಗಳಾಗಿದ್ದು, ಚಿಕಿತ್ಸೆಯ ನಂತರವೂ ಇಬ್ಬರು ರೇಬಿಸ್ ರೋಗಕ್ಕೆ ಮೃತಪಟ್ಟಿದ್ದಾರೆ. ಹಾವೇರಿಯಲ್ಲಿ 3237 ಮಂದಿಗೆ ನಾಯಿಗಳು ಕಚ್ಚಿದ್ದು, ಓರ್ವ ಮೃತಪಟ್ಟಿದ್ದಾನೆ. ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ 6585, ಗದಗ 5152, ಉತ್ತರ ಕನ್ನಡ 8648 ಹಾಗೂ ವಿಜಯಪುರದಲ್ಲಿ 7859 ಮಂದಿಗೆ ನಾಯಿಗಳು ಕಚ್ಚಿರುವ ವರದಿಯಾಗಿದೆ.