ಮೇಲ್ಸೇತುವೆ ಕಾಮಗಾರಿಗೆ ಹುಬ್ಬಳ್ಳಿ ಜನ ಹೈರಾಣುಚೆನ್ನಮ್ಮ ಸರ್ಕಲ್, ದೇಶಪಾಂಡೆ ನಗರ, ಕೊಪ್ಪಿಕರ್ ರಸ್ತೆ, ಅಂಬೇಡ್ಕರ್ ರಸ್ತೆ, ಗಿರಣಿ ಚಾಳ, ಭಾರತ್ ಮಿಲ್ ಸರ್ಕಲ್, ಕಾರವಾರ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಮುಖ್ಯರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದನ್ನು ಗಮನಿಸಿದ ವಾಹನ ಸವಾರರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಲೇ ಪರ್ಯಾಯ ಮಾರ್ಗಗಳತ್ತ ಮುಖಮಾಡಿದರು.