ವಚನದರ್ಶನದಿಂದ ಬಸವತತ್ವದ ಹಾದಿ ತಪ್ಪಿಸುವ ಕೆಲಸವಚನ ಸಾಹಿತ್ಯ, ವಚನ ಸಂಸ್ಕೃತಿ ಹೊಗಳುತ್ತ ಓದುಗರ ದಿಕ್ಕು ತಪ್ಪಿಸುವ ಕಾರ್ಯ ಕುಹಕಿಗಳಿಂದ ನಡೆದಿದೆ. ಶರಣರು ಹೊಸದನ್ನು ಏನೂ ಹೇಳಿಲ್ಲ. ಅವರು ಹೇಳಿದ್ದೆಲ್ಲವೂ ಈ ಮೊದಲೆ ವೇದ, ಉಪನಿಷತ್ತು ಭಗವದ್ಗೀತೆಗಳಲ್ಲಿತ್ತು ಎಂದು ಹೇಳಿ ವೈಚಾರಿಕತೆ, ವೈಜ್ಞಾನಿಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿ ವಚನ ದರ್ಶನ ಕೃತಿ ಪ್ರಕಟಿಸಲಾಗಿದೆ.