10 ದಿನಗಳಲ್ಲಿ ಪೌರಕಾರ್ಮಿಕರ ನೇರ ನೇಮಕಾತಿಪಾರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ 2017ರಲ್ಲೇ ಆದೇಶ ಹೊರಡಿಸಿದೆ. ಹಲವಾರು ಪಾಲಿಕೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳು ನೇರನೇಮಕಾತಿ ಮಾಡಿಕೊಂಡು ಆದೇಶಪತ್ರವನ್ನೂ ವಿತರಿಸಿವೆ. ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ನೇರ ನೇಮಕಾತಿ ಮಾಡಿಕೊಳ್ಳದೆ, ಆದೇಶ ಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.