ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿ ಜೀವನದಲ್ಲಿ ಸಫಲರಾಗಲಿ: ನಿರಾಣಿಸಮಾಜದಲ್ಲಿ ಬಡ ಕುಟುಂಬಳಿಂದ ಬಂದ ಅನೇಕ ಜನ ಸಾಧನೆ ಮಾಡಿ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ಪೋಸಿಸ್‌ನ ಸುಧಾ ಮೂರ್ತಿ, ವಿಜಯಾನಂದ ಸಂಕೇಶ್ವರ, ಕಿರಣ ಮಜುಂದಾರ ಅವರು ಸಾಮಾನ್ಯ ಬಡಕುಟುಂಬಗಳಿಂದ ಬಂದವರೇ. ಅವರು ಶ್ರಮಪಟ್ಟು, ಹಗಲಿರುಳು ದುಡಿದು ಸಮಾಜದಲ್ಲಿ ಹೆಸರು ಗಳಿಸಿದ್ದಾರೆ.