ಕುಸ್ತಿ ಸಂಸ್ಥೆ vs ಕುಸ್ತಿಪಟುಗಳು ಜಟಾಪಟಿ ಮತ್ತೆ ಆರಂಭ!ಮುಂಬರುವ ಒಲಿಂಪಿಕ್ಸ್ ಏಷ್ಯಾ ಅರ್ಹತಾ ಟೂರ್ನಿಗೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಆಯ್ಕೆ ಟ್ರಯಲ್ಸ್ ಘೋಷಿಸಿದೆ. ಆದರೆ ಕಳೆದೊಂದು ವರ್ಷದಿಂದ ಡಬ್ಲ್ಯುಎಫ್ಐ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಜರಂಗ್, ವಿನೇಶ್, ಸಾಕ್ಷಿ ಟ್ರಯಲ್ಸ್ಗೆ ತಕರಾರು ತೆಗೆದಿದ್ದಾರೆ. ಹೀಗಾಗಿ ಕುಸ್ತಿ ಸಂಸ್ಥೆ ಹಾಗೂ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರುವಾದಂತಾಗಿದೆ.